ಅರುಣ್ ಸಾಗರ್ ಮಗಳು ಅದಿತಿ ಸಾಗರ್ ಸ್ಯಾಂಡಲ್ ವುಡ್ ಗೆ ಎಂಟ್ರಿ | Filmibeat Kannada

2017-12-26 1

Kannada actor Arun Sagar's daughter Aditi Sagar starts her Sandalwood debut as a singer. Aditi Sagar sang a song to Arjun Janya musical 'Rambo 2' kannada movie.


ಅಪ್ಪ ಚಿತ್ರರಂಗದಲ್ಲಿ ಇದ್ದರೆ ಅವರ ಮಕ್ಕಳು ಕೂಡ ಹೆಚ್ಚಾಗಿ ಅದೇ ಹಾದಿಯಲ್ಲಿ ಮುಂದುವರೆಯುತ್ತಾರೆ. ಕನ್ನಡ ಚಿತ್ರರಂಗದ ಅನೇಕ ನಟರ ಮಕ್ಕಳು ಈಗಾಗಲೇ ಸಿನಿಮಾ ಮಾಡಿದ್ದಾರೆ. ಈಗ ನಟ ಅರುಣ್ ಸಾಗರ್ ಪುತ್ರಿ ಕೂಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ರಂಗಭೂಮಿ ಹಿನ್ನಲೆಯಿಂದ ಬಂದಿರುವ ಅರುಣ್ ಸಾಗರ್ ಒಳ್ಳೆಯ ನಟ. ನಾಟಕ, ಸಾಹಿತ್ಯದ ಬಗ್ಗೆ ಹೆಚ್ಚು ಒಲವು ಇರುವ ಅರುಣ್ ಸಾಗರ್ ಈಗ ತಮ್ಮ ಮಗಳನ್ನು ಕೂಡ ಕಲೆಯ ಜಗತ್ತಿಗೆ ಪರಿಚಯ ಮಾಡುತ್ತಿದ್ದಾರೆ. ಅರುಣ್ ಸಾಗರ್ ಅವರ ಪುತ್ರಿ ಅದಿತಿ ಸಾಗರ್ ಈಗ ಗಾಯಕಿ ಆಗಿ ಕನ್ನಡ ಸಿನಿಮಾರಂಗ ಪ್ರವೇಶ ಮಾಡಿದ್ದಾರೆ. ಈಗಾಗಲೇ ರಂಗ ಗೀತೆ, ಇಂಗ್ಲೀಷ್ ಹಾಡುಗಳು ಸೇರಿದಂತೆ ಸಾಕಷ್ಟು ಹಾಡುಗಳನ್ನು ಹಾಡಿ ಯೂಟ್ಯೂಬ್ ನಲ್ಲಿ ಜನಪ್ರಿಯತೆ ಗಳಿಸಿದ ಅದಿತಿ ಸಾಗರ್ ಈಗ ಚಿತ್ರಗೀತೆ ಹಾಡುವುದಕ್ಕೆ ಶುರು ಮಾಡಿದ್ದಾರೆ.

Videos similaires